Tuesday, March 1, 2011


ಹೊಸತೊಂದ ಕಾಣ ...
 

ಸೂರ್ಯಾಸ್ತದ ಈ ಅಂಚಿನಲ್ಲಿ 
ಹೊರಟಿಹುದು ಬಾಳ ಪಯಣ
ಅತ್ತಿತ್ತ ಹಾದಿ ಬಗೆಯುತ್ತ...

ಕಷ್ಟ ಕೋಟಲೆಗಳೆಂಬ
ಅಲೆಗಳನ್ನೆರುತ್ತ ಇಳಿಯುತ್ತ
ಅತ್ತಿತ್ತ ಹಾದಿ ಬಗೆಯುತ್ತ...

ಅತ್ತ ಬಾನು ಸಮುದ್ರ
ಒಂದಾಗುತಿಹುದ ನೋಡ 
ಅಲ್ಲೇನಿಹುದೆ೦ಬುದರ ತಿಳಿಹೇಳ ನೋಡ... 

ಅದನ್ನರಸಿ ಹೊರಟ
ನನ್ನೀ ಬಂಡಿಗೆ ಕಂಡದ್ದು
ಹೊಸತೊಂದು ಸೂರ್ಯೋದಯ!!! 

No comments:

Post a Comment